Report Release: Bengaluru’s Rising Air Quality Crisis

The need for sustained reportage and action

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಮೇಲೆ ವರದಿ ಬಿಡುಗಡೆ

ನಿರಂತರ ವರದಿ ಮತ್ತು ಪರಿಹಾರದ ಅಗತ್ಯ

ಬೆಂಗಳೂರು ನಗರದಲ್ಲಿ. ಹೆಚ್ಚುತ್ತಿರುವ ವಾಯು ಮಾಲಿನ್ಯ ಬಿಕ್ಕಟ್ಟಿನ ಬಗ್ಗೆ ವರದಿಯೊಂದನ್ನು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜ್ಞಾನಿ ಶ್ರೀಯುತ ನಾಗಪ್ಪ ಮತ್ತು ಸಿ40 ಸಿಟೀಸ್ ಪ್ರಮುಖ ನಿರ್ದೇಶಕ ಸಂಜಯ್ ಶ್ರೀಧರ್ ಬಿಡುಗಡೆ ಮಾಡಿದರು. ಕೋಮೀಡಿಯಾ ಲ್ಯಾಬ್ ಮತ್ತು ಕ್ಲೈಮೇಟ್ ಟ್ರೆಂಡ್-ಗಳು ಈ ವರದಿಯು ನಗರದಲ್ಲಿನ ಅಂತರ್ಜಾಲ ಆಧಾರಿತ ಮಾಲಿನ್ಯ ​​ಮೇಲ್ವಿಚಾರಣೆಯ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿತು. ಅಂಕಿ ಅಂಶಗಳ ಮತ್ತು ವಾಸ್ತವಾಂಶಕ್ಕಿರುವ ಅಂತರವನ್ನು ಈ ವರದಿ ತೋರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಉತ್ತಮ ವಾಯು ಗುಣಮಟ್ಟದ ನಿರ್ವಹಣೆಗಾಗಿ ಸುಧಾರಣೆ ಮತ್ತು ಪಾರದರ್ಶಕತೆ ಅಗತ್ಯವನ್ನು ಒತ್ತಿ ಹೇಳಿದೆ. 2017ರವರೆಗೆ ಬರಿಯ ಮೂರು ತಾಣಗಳಲ್ಲಿ ವಾಯು ಮಾಲಿನ್ಯಕಾರಕ, ವಿಷಕಾರಿ PM 2.5 ಅನ್ನು ದಾಖಲೆ ಮಾಡಲಾಗಿತ್ತು. PM 2.5 ಅಂಕಿ ಅಂಶಗಳನ್ನು ದಾಖಲೆ ಮಾಡದ ದಿನಗಳ ಸಂಖ್ಯೆ ಹೀಗಿದೆ.

Station Name No of days 2015 No of Days 2016 No of Days 2017
BTM 152 134 90
BWSSB 103 124 73
Peenya 104 276 79

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ವಾಹನ ಸಂಚಾರ ಹೆಚ್ಚಳ ಮತ್ತು ನಿರ್ಮಾಣ ಚಟುವಟಿಕೆಗಳ ಕಾರಣದಿಂದಾಗಿ, 2016-2017ರಲ್ಲಿ ಬೆಂಗಳೂರಿನಲ್ಲಿನ 2.5 ಮಟ್ಟಗಳು ಆಂಬಿಯೆಂಟ್ ವಾಯು ಗುಣಮಟ್ಟದ ರಾಷ್ಟ್ರೀಯ ಮಿತಿಯ (40.0 μg / m3) 3% ರಿಂದ 45% ಕ್ಕೆ ಏರಿವೆ. ವಾಹನಗಳ ಹೊಗೆ, ಕಸ ಸುಡುವುದು ಮತ್ತು ಧೂಳು ವಾಯುಮಾಲಿನ್ಯಕ್ಕೆ 65%ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ ಎಂದು ವರದಿ ಹೇಳುತ್ತದೆ.

ಕ್ಷೀಣಿಸುತ್ತಿರುವ ವಾಯು ಗುಣಮಟ್ಟದ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಾ, ಲೇಕ್ ಸೈಡ್ ಸೆಂಟರ್ ಫಾರ್ ಹೆಲ್ತ್ ಪ್ರಮೋಷನ್-ನ ಮಕ್ಕಳ ಶ್ವಾಸಕೋಶ ತಜ್ಞ ಡಾ. ಪರಮೇಶ್ ಎಚ್ ಮಾತನಾಡಿದರು. “ಮಕ್ಕಳಲ್ಲಿ ಆಸ್ತಮಾ, ಶ್ವಾಸಕೋಶದ ಸೋಂಕು, ನಿದ್ರಾಹೀನತೆ, ಉಸಿರಾಟ, ಮಧ್ಯಮ ಕಿವಿ ಸೋಂಕುಗಳು, ನ್ಯುಮೋನಿಯಾ ಮತ್ತು ದೀರ್ಘಕಾಲದ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (COPD) ಇತ್ಯಾದಿ ರೋಗಗಳು ನಗರದಲ್ಲಿರುವ ವಾಯುಮಾಲಿನ್ಯದಿಂದಾಗಿ ದಿನೇ ದಿನೇ ಹೆಚ್ಚುತ್ತಿವೆ; ಕಳೆದ 17 ವರ್ಷಗಳ ನನ್ನ ಸಂಶೋಧನೆಯು ಗಂಭೀರವಾದ ಕೆಮ್ಮು 10% ರಿಂದ 21% ಗೆ ಹೆಚ್ಚಿದೆಯೆಂದು ಸೂಚಿಸುತ್ತದೆ,” ಎಂದರು.

ಹೆಚ್ಚಿನವರು ವಾಯು ಮಾಲಿನ್ಯದ ಪರಿಣಾಮವನ್ನು ಶ್ವಾಸಕೋಶಕ್ಕಷ್ಟೇ ಸೀಮಿತಗೊಳಿಸಿದರೆ, ಜಯದೇವ ಆಸ್ಪತ್ರೆಯ ಹೃದ್ರೋಗ  ತಜ್ಞ ಡಾ.ರಾಹುಲ್ ಪಾಟೀಲ್ ವಾಯು ಮಾಲಿನ್ಯವು ಹೃದಯಾಘಾತವನ್ನು ಕೂಡ ಉಂಟುಮಾಡಬಲ್ಲುದು ಎನ್ನುತ್ತಾರೆ. ಗಾಳಿಯ ಗುಣಮಟ್ಟ ಮತ್ತು ಅಪಧಮನಿಯ ತಡೆಗಟ್ಟುವಿಕೆಯ ನಡುವಿನ ಸಂಬಂಧ ದಿನಗಳೆದಂತೆ ಹೆಚ್ಚು ಸ್ಪಷ್ಟವಾಗುತ್ತಿದೆ. ಕಳೆದ 8 ತಿಂಗಳಲ್ಲಿ 40 ವರ್ಷ ವಯಸ್ಸಿನೊಳಗಿನವರಲ್ಲಿ ಆಗಿರುವಂತಹ ನೂರಾರು ಹೃದಯಸಂಬಂಧಿ ಪ್ರಕರಣಗಳನ್ನು ನೋಂದಾಯಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಬೆಂಗಳೂರಿನ ಕಾರ್ ಮತ್ತು ಟ್ಯಾಕ್ಸಿ ಚಾಲಕರಾಗಿದ್ದು, ಇವರು ಸಂಚಾರದಟ್ಟಣೆಯಲ್ಲಿ ದೀರ್ಘಕಾಲ ಕಳೆಯುತ್ತಾರೆ. ಇದರಿಂದಾಗಿ ಅವರು ಹೃದಯರೋಗಗಳಿಗೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ,” ಎಂದು ಅವರು ಹೇಳುತ್ತಾರೆ.

ವರದಿಯ ಲೇಖಕಿ ಐಶ್ವರ್ಯಾ ಸುಧೀರ್ ಹೇಳುತ್ತಾರೆ: “ವಾಯುಮಾಲಿನ್ಯದ ತೊಂದರೆಯು ಕೈಮೀರುವ ಮುನ್ನ ತುರ್ತು ಪರಿಹಾರ ಕ್ರಮ ಕೈಗೊಳ್ಳುವ ಅಗತ್ಯವನ್ನು ಒತ್ತಿ ಹೇಳುವುದು ಈ ವರದಿಯ ಉದ್ದೇಶ. ದೆಹಲಿ ಮತ್ತು ಉತ್ತರಭಾರತದ ಇತರ ನಗರಗಳಲ್ಲಿರುವ ಸಮಸ್ಯೆ ನಮಗೆ ಗೊತ್ತು. ಆದರೆ ನಮ್ಮಲ್ಲಿ ಏನಾಗುತ್ತಿದೆಯೆಂಬುದನ್ನು ನಾವು ಮರೆಯಬಾರದು. ನಾವು ಉಸಿರಾಡುವ ಮಟ್ಟದಲ್ಲಿರುವ ವಾಯು ಮಾಲಿನ್ಯವು ಕರ್ನಾಟಕ ಸರಕಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ದಾಖಲಿಸುತ್ತಿರುವ ಪರಿಸರದ ವಾಯು ಮಾಲಿನ್ಯ ಮಟ್ಟಕ್ಕಿಂತಲೂ ಹೆಚ್ಚಾಗಿರುತ್ತದೆ. ಸಂಚಾರದಟ್ಟಣೆಯಿರುವ ಸಮಯ ಆಯ್ದ ಏಳು ರಸ್ತೆಗಳಲ್ಲಿ ನಾವು ಮಾಡಿದ ಸಮೀಕ್ಷೆಯಿಂದ ವಾಯು ಮಾಲಿನ್ಯದ ಮಟ್ಟವು 800 microgram/ cubic meter ಕ್ಕಿಂತಲೂ ಹೆಚ್ಚಿರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಮಕ್ಕಳು ಮತ್ತು ಉದ್ಯೋಗಿಗಳು ವಾರದುದ್ದಕ್ಕೂ ಸಂಚಾರದಲ್ಲಿ ಕೆಲಭಾಗವನ್ನು ಕಳೆಯುವ ಕಾರಣ ಈ ಮಟ್ಟದ ವಾಯುಮಾಲಿನ್ಯವು ಖಂಡಿತವಾಗಿಯೂ ಆರೋಗ್ಯದ ಪರಿಣಾಮವನ್ನು ಬೀರುತ್ತದೆ.”

“ಬೆಂಗಳೂರಿನಲ್ಲಿ ದೆಹಲಿ ಮತ್ತು ಇತರ ನಗರಗಳಂತಲ್ಲದೆ, ಅದೃಷ್ಟವಶಾತ್ ಅನೇಕ ನಾಗರಿಕ ಚಳವಳಿ ಗುಂಪುಗಳಿವೆ, ಇಂತಹವರು ತಮ್ಮ ವಾರ್ಡ್ ಮತ್ತು ನೆರೆಹೊರೆಯ ಮಟ್ಟದಲ್ಲಿ ಶುದ್ಧ ಗಾಳಿಯಿರಬೇಕೆಂಬ ನಿಟ್ಟಿನಲ್ಲಿ ವಿವಿಧ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ತನ್ನ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ವಾಯು ಗುಣಮಟ್ಟದ ಅಂಕಿಅಂಶಗಳನ್ನು ಆಧರಿಸಿ ವಾಸ್ತವವಾಗಿ ಅನುಷ್ಠಾನಕ್ಕೆ ತರಬಹುದಾದಂತಹ ಕಾರ್ಯ ಯೋಜನೆಯನ್ನು ರೂಪಿಸಬೇಕಾಗಿದೆ ಎಂದು ಕೋಮೀಡಿಯಾ ಲ್ಯಾಬ್ ನಿರ್ದೇಶಕಿ ಪಿಂಕಿ ಚಂದ್ರನ್ ತಿಳಿಸಿದ್ದಾರೆ.

 

Update on the Workshop

A report titled “Bengaluru’s Rising Air Quality Crisis’ was released this morning by Mr Nagappa, Chief Scientist, KSPCB and Sanjay Sridhar, Regional Director, C40 Cities, at a media workshop on air pollution.

The report prepared by Co Media Lab and Climate Trends highlighted the looming air quality crisis in the city. The workshop speakers and panelists included academics from IIT- Madras and Mumbai, experts from policy think tanks, doctors, researchers, campaigners and media in the field of environment and air pollution, and citizen activists. The pollution control board’s officials were present too.

The report focused on the online monitoring in the city and pointed to huge gaps in data, questioning its reliability and emphasizing on the need for improvement and transparency for better air quality management. Until 2017 there were only three online stations monitoring PM2.5, the most toxic of the pollutants, given its small size. The number of days without PM2.5 data is as follows:

Station Name No of days 2015 No of Days 2016 No of Days 2017
BTM 152 134 90
BWSSB 103 124 73
Peenya 104 276 79

According to the state pollution control board, the particulate matter 2.5 levels in Bengaluru for 2016-2017 have exceeded the National Ambient Air Quality Standards (40.0 μg/m3) by 3% to 45% due to vehicular traffic increase and construction activities.

The report points to vehicular emissions, waste burning and dust as the primary culprits of poor air quality, contributing to more than 65% of the problem.

Expressing concern on deteriorating air quality, paediatric pulmonologist Dr Paramesh H of Lakeside Center for Health Promotion said, “Asthma in children, bronchial infection, sleep disorder, breathing, middle ear infections, pneumonia and Chronic Obstructive Pulmonary Disease (COPD) are all on the rise due to air pollution in the city; and in the last 17 years my research indicates an increase in chronic cough from 10% to 21%”.

While most pursue air quality as a problem related to the lungs, Dr Rahul Patil, cardiologist from Jayadeva Hospital, shares that air pollution triggers heart attacks and the link to air quality and artery blockage is becoming increasingly clear. “In the last 8 months hundreds of cases in the under-40 age group have been registered and most of them are car and taxi drivers from Bengaluru who tend to spend long hours in traffic snarls, which has been increasing their risk of having an attack”.

The report’s author, Aishwarya Sudhir said, “the purpose of this exercise is to highlight the need for urgent action on the problem before it gets out of hand. While we all know that Delhi and cities in the north have a clear problem, we shouldn’t lose sight of what’s brewing at home. The breathable pollution levels are much higher than that of the ambient levels monitored by the KSPCB, for obvious reasons. An air quality monitoring exercise we conducted for 7 days on select routes during peak hours revealed that while commuting in traffic, one can be exposed to levels as high as 800 ug/m3, and it’s important to remember that many children and working class end up spending a significant part of their day throughout the week in traffic, this certainly will have an associated health impact”.

“Unlike Delhi and other cities, Bengaluru fortunately has many citizen-action groups that are already championing the cause of clean air at their ward and neighbourhood level. The state government needs to take its citizens into confidence and formulate an implementable action plan which is based on air quality data so that it can bring about a change,” said Pinky Chandran, the Director of Co Media Lab.

 

1 Trackback / Pingback

  1. Air pollution in the city worsens – The Softcopy

Comments are closed.